ಗಣಿತ

ಎಲ್ಲೆಲ್ಲಿ ಅಳತೆ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲ ಗಣಿತವಿದೆ. ಗಣಿತವು ನಿಖರತೆಯನ್ನು ಸಾಧಿಸುವ ದಿಕ್ಕಿನಲ್ಲಿ ಒತ್ತಾಯ ಪಡಿಸುತ್ತದೆ. ಕೆಲವೇ ಕೆಲವು ಮೂಲ ಸತ್ಯಗಳ ಆಧಾರದ ಮೇಲೆ ಹೊಸ ಸತ್ಯಗಳ ಸ್ಥಾಪನೆಗೆ ಮುಂದೊಡ್ಡಿಕೊಳ್ಳುತ್ತದೆ. ಉಳಿದ ಶಾಸ್ತ್ರಗಳ ಸಿದ್ದಾಂತ ಸಾಧನೆಗೆ ಬೆನ್ನುಲುಬಾಗಿದೆ. ಅತೀವ ಮನೋರಂಜಕವೂ, ಅಹ್ಲಾದಕರವೂ ಕೆಲವೊಮ್ಮೆ ಅತಿ ಗಂಭೀರವೂ ಆದ ಈ ಶಾಸ್ತ್ರದ ಬಗೆಗಿನ ಆರ್ಟಿಕಲ್ ಗಳಿಗೆ, ಪುಸ್ತಕಗಳಿಗೆ ಇಲ್ಲಿ ಅವಕಾಶ.

ಸ್ಟೋಕಾಸ್ಟಿಕ್ ಫಿಲ್ಟರಿಂಗ್

ತನ್ನ ಪ್ರೆಡಿಕ್ಷನ್ ಗಳಲ್ಲಿ ನಿಖರತೆಯತ್ತ ಸಾಗುವ ಮಾನವನ ಪ್ರಯತ್ನ ಪ್ರಶ್ಸಾತೀತ. ಮಾನವ ನಿರ್ಮಿತ ಯಂತ್ರಗಳಲ್ಲಿ ಈ ಪ್ರಯತ್ನ ಸತತವಾಗಿ ಸಾಗುತ್ತಲೇ ಇದೆ. ಕೆಲವೊಮ್ಮೆ ಇವು ಸಹಜ ಹಾಗೂ ಸರಳ , ಕೆಲವೊಮ್ಮೆ ಇದು ಸಂಕೀರ್ಣ ಹಾಗೂ ಜಟಿಲ. ನಿಖರತೆಯೆಂಬುದು ಎಷ್ಟು ಕಷ್ಟ ಪಟ್ಟರೂ ಸಹ ನಮ್ಮಿಂದ ದೂರವಾಗುತ್ತಲೇ ಇರುತ್ತದೆ.  ಅಂತಹುವುಗಳಲ್ಲೂ ನಿಖರತೆಯನ್ನು ಸಾಧಿಸಲು ಪ್ರಯತ್ಸ ನಿರಂತರ ಹೊಸ ಶಾಸ್ತ್ರಗಳ ಮೂಲಕ ನಿರಂತರವಾಗಿ ಸಾಗಿದೆ. ಅಂತಹ ಪ್ರಯತ್ನಕ್ಕೆ ಸ್ಟೋಕಾಸ್ಟಿಕ್ ಫಿಲ್ಟರಿಂಗ್ ಎಂಬ ಸಂಭವನೀಯತೆಯ ಅಂಗಶಾಸ್ತ್ರ ಸಹಾಯಕ್ಕೆ ಬರುತ್ತದೆ. 

ಇದನ್ನು ಮುಂದಿನ ಉದಾಹರಣೆಯೊಂದಿಗೆ ನೋಡೋಣ. 

ವರ್ಗೀಕರಣ

Vote Result

----------

ಸಂಭವನೀಯತೆ

ನಾವು ದಿನನಿತ್ಯ ನೋಡುವ ಹಲವಾರು ಘಟನೆಗಳಲ್ಲಿ ನಿರ್ದಿಷ್ಟವಾಗಿ ಹೇಳಬಹುದಾದಂಥ ಘಟನೆಗಳು ಕೆಲವೇ ಕೆಲವು. ಬಹಳ ಸಂದರ್ಭಗಳಲ್ಲಿ 2 ಘಟನೆಗಳನ್ನು ಹೋಲಿಸಿ ನೋಡುವಾಗ, ಒಂದು ಘಟನೆಯ ಸಾಧ್ಯತೆ ಹೆಚ್ಚು , ಇನ್ನೊಂದು ಘಟನೆಯ ಸಾಧ್ಯತೆ ಕಡಿಮೆ ಎಂದು ನಿರ್ಧರಿಸುತ್ತೇವೆ. ಹೀಗೆ ಸಾಧ್ಯತೆ ಹೆಚ್ಚು ಅಥವಾ ಕಡಿಮೆ ಎಂದು ಹೇಗೆ ನಿರ್ಧರಿಸುತ್ತೇವೆ. ಇವುಗಳನ್ನು ಅಭ್ಯಾಸ ಮಾಡುವ ಶಾಸ್ತ್ರವೇ ಸಂಭವನೀಯತೆ.

ಈ ಶಾಸ್ತ್ರದ ಉಗಮ ಹೆಚ್ಚು ಕಡಿಮೆ ಜೂಜಿನ ಅಡ್ಡೆಗಳಲ್ಲೇ ಆಯಿತೆನ್ನಬಹುದು. ಅಲ್ಲಿ ಮನುಷ್ಯ ಗೆಲ್ಲುವ ಸಾಧ್ಯತೆಗಳ ಕುರಿತು ಹೆಚ್ಚು ಹೆಚ್ಚು ವಿಚಾರಿಸಿದಂತೆಲ್ಲಾ ಈ ಶಾಸ್ತ್ರದ ಉಗಮಕ್ಕೆ ನಾಂದಿಯಾಗುತ್ತ ಹೋಯಿತು.

ವರ್ಗೀಕರಣ

Vote Result

----------

ಕ್ಯಾಲ್ಕ್ಯುಲಸ್

calculusಬದಲಾವಣೆ ಎನ್ನುವದು ಈ ಜಗತ್ತಿನ ನಿತ್ಯ ಸತ್ಯ. ಈ ಬದಲಾವಣೆಗಳನ್ನು ಗಮನಿಸಿದರೆ ಈ ಬದಲಾವಣೆಗಳು ಕೆಲವೊಂದು ಅಂಶಗಳನ್ನು ಅವಲಂಬಿಸುರುವದು ಕಂಡುಬರುತ್ತವೆ.  ಈ ಅಂಶಗಳಿಗೆ ಪ್ಯಾರಾಮೀಟರ್ ಎಂದೂ ಕರೆಯಬಹುದು.

ವರ್ಗೀಕರಣ

Vote Result

+++++-----
Syndicate content