ಕನ್ನಡದಲ್ಲಿ ಬರೆಯುವದು

ಕನ್ನಡದಲ್ಲಿ ಬರೆಯಲು ಈ ಕೆಳಗಿನ ಯಾವುದೇ ವಿಧಾನ ಅನುಸರಿಸಬಹುದು.

  • ಫೊನೆಟಿಕ್ ವಿಧಾನಗಳು
    • ಈ ಮುಂದಿನ ಲಿಂಕ್ ನ ಸಹಾಯ ಪಡೆದುಕೊಳ್ಳಿ.   [ಅ Type in Kannada]. ಇದರ ಮೇಲೆ ರೈಟ್ ಕ್ಲಿಕ್ ಮಾಡಿ ಬುಕ್ ಮಾರ್ಕ್ ಮಾಡಿಕೊಳ್ಳಿ. ಯಾವುದೇ ವೆಬ್ ಪೇಜ್ ಓಪನ್ ಮಾಡಿದಾಗ ಈ ಬುಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ. ಇದರಿಂದ ಯಾವುದೇ ವೆಬ್ ಪೇಜ್ ನಲ್ಲಿ ನೀವು ಕನ್ನಡ ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ google transliteteration ಈ ಪೇಜ್ ಅನ್ನು ನೋಡಿ. ಇದನ್ನು ಬಳಸುದನ್ನು ಈ ತಾಣ ರೆಕಮೆಂಡ್ ಮಾಡುತ್ತದೆ.  
    •  ಈ ತಾಣದಲ್ಲಿ ಬರೆಯುವಾಗ input format ಅನ್ನು Full HTML ಎಂದು ಆಯ್ದುಕೊಳ್ಳಬೇಕು. ಹೀಗೆ ಆಯ್ದುಕೊಂಡಾಗ ನೀವು ಕನ್ನಡವನ್ನು ನೀವು ಬರೆಯುವ ಭಾಷೆಯನ್ನಾಗಿ ಡ್ರಾಪ್ ಡೌನ್ ಬಾಕ್ಸ್ ನಲ್ಲಿ ಸೆಲೆಕ್ಟ್ ಮಾಡಬಹುದು.  
    • ಈ ತಾಣದಲ್ಲಿ ಬರೆಯುವಾಗ ಎಡಭಾಗದ ಕೆಳಮೂಲೆಯಲ್ಲಿ ಒಂದು ಚಿಕ್ಕ ಬಾಕ್ಸ್ ಬರುವದು. ಅಲ್ಲಿ Kannada Phonetic ಎಂದು ಆಯ್ದುಕೊಳ್ಳಬಹುದು. 
    • Nudi ಅಥವಾ baraha ತಂತ್ರಜ್ಞಾನವನ್ನು ನಿಮ್ಮ ಕಂಪ್ಯೂಟರಿಗೆ ಇನ್ಸ್ಟಾಲ್ ಮಾಡಬೇಕು. ಅವುಗಳಲ್ಲಿ unicode ಫಾಂಟ್ ಗಳನ್ನು ಆಯ್ದುಕೊಂಡು ಅವುಗಳಿಂದ ಕನ್ನಡ ಬರೆಯಬಹುದು.
  •  ಕನ್ನಡ ಟೈಪ್ ರೈಟರ್ ವಿಧಾನಗಳು.(ವೇಗದ ಮತ್ತು ಸ್ಪಷ್ಟ ಬರವಣಿಗೆ ಸಾಧ್ಯ).  ಸ್ವಲ್ಪ ಮಟ್ಟಿನ ಅಭ್ಯಾಸದ ಅವಶ್ಯಕತೆ ಇದೆ. ಇಲ್ಲಿ ಕನ್ನಡ ಕೀಬೋರ್ಡ್ ಲೇ ಔಟ್ ಬಳಸಲಾಗುವದು. ಇದಕ್ಕೆ ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇ ಔಟ್ ಎಂದೂ ಕರೆಯಬಹುದು. ಈ ಅಭ್ಯಾಸವನ್ನು ಮಾಡುವದಿದ್ದರೆ ಮುಂದಿನ ವೆಬ್ ಸೈಟ್ ನ ಸಹಾಯ ಪಡೆದುಕೊಳ್ಳಬಹುದು. http://www.gate2home.com/?language=kn.  
    • ಈ ತಾಣದಲ್ಲಿ ಬರೆಯುವಾಗ input format ಅನ್ನು Filtered html ಎಂದು ತೆಗೆದುಕೊಂಡಾಗ, ಎಡಭಾಗದ ಕೆಳಮೂಲೆಯಲ್ಲಿ Kannada Typewriter ಎಂದು ಆಯ್ದುಕೊಳ್ಳಬಹುದು.
    •  ನಿಮ್ಮ ಆಪರೇಟಿಂಗ್ ಸಿಸ್ಟಮ್ ನ( ವಿಂಡೊಸ್, ಲಿನಕ್ಕ್ಷ್,ಮಾಕ್ ಯಾವುದೇ ಇರಬಹುದು) ಲ್ಯಾಂಗ್ವೇಜ್ ಸೆಟ್ಟಿಂಗ್ ನಲ್ಲಿ ಕನ್ನಡ ಭಾಷೆಯನ್ನು ಎನೇಬಲ್ ಮಾಡಿಕೊಳ್ಳಬೇಕು. ಬರೆಯಬೇಕಾದರೆ ಕನ್ನಡ ಕೀ ಬೋರ್ಡ್ ಎಂದು ಸೆಲೆಕ್ಟ್ ಮಾಡಿಕೊಂಡು ಬರೆಯಬಹುದು.
    •  Nudi ಅಥವಾ baraha ತಂತ್ರಜ್ಞಾನವನ್ನು ನಿಮ್ಮ ಕಂಪ್ಯೂಟರಿಗೆ ಇನ್ಸ್ಟಾಲ್ ಮಾಡಬೇಕು. ಅವುಗಳಲ್ಲಿ ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇಔಟ್ ಆಯ್ಕೆ ಮಾಡಿಕೊಂಡು ಬರೆಯಬಹುದು. 

  ಈ ತಾಣದಲ್ಲಿ ಬರೆಯುವವರಲ್ಲಿ ವಿನಂತಿ. ಇಲ್ಲಿ ಕೇವಲ ಕನ್ನಡ ವಾಕ್ಯಗಳಿಗಷ್ಟೇ ಅವಕಾಶ. ಇದು ಕನ್ನಡಿಗರಿಗಾಗಿ ಇರುವ ಜ್ನಾನಕೋಶ. ಕನ್ನಡ ವಾಕ್ಯಗಳಲ್ಲಿ ನೀವು ಬೇರೆ ಬೇರೆ ಭಾಷೆಗಳ ಪದಗಳನ್ನು ಬಳಸಬಹುದು. ಕನ್ನಡ ಬಿಟ್ಟು ಇನ್ಯಾವುದೇ ಭಾಷೆಯ ವಾಕ್ಯಗಳಿದ್ದರೆ ಅವುಗಳನ್ನು ತಾಣದ ಮೊಡರೇಟರುಗಳು ನಿರ್ಧಾಕ್ಷಿಣ್ಯವಾಗಿ ಡಿಲಿಟ್ ಮಾಡಬಹುದು.

ಎಲ್ಲರಿಗೂ ಶುಭಹಾರೈಕೆಗಳು.