ಕೃತಕ ಬುದ್ಧಿವಂತಿಕೆಯ ಏಜೆಂಟುಗಳು
ಕೃತಕ ಬುದ್ಧಿವಂತಿಕಯ ಬಹುಮುಖ್ಯ ಗುರಿಯೇ ಇಂಟಲಿಜೆಂಟ್ ಏಜೆಂಟುಗಳನ್ನು ಸೃಷ್ಠಿಸುವುದು. ಹಾಗಿದ್ದರೆ ಏಜೆಂಟ್ ಎಂದರೆ ಏನು.. ತನ್ನ ಸುತ್ತ ಮುತ್ತಲಿನ ಪರಿಸರವನ್ನು ತನ್ನ ಸೆನ್ಸಾರ್ ಗಳ ಮೂಲಕ ಅರಿತು, ತನ್ನ ಅಕ್ಟುವೇಟರ್ ಗಳ ಅಥವಾ ಅಂಗಗಳ ಮೂಲಕ ಆ ಪರಿಸರದ ಮೇಲೆ ಕ್ರಿಯೆಗಳನ್ನು ಮಾಡುವದು. ಒಂದು ಏಜೆಂಟ್ ನ ಯಾವುದೇ ಕ್ರಿಯೆ ಅದು ಇಲ್ಲಿಯವರೆಗೆ ಮಾಡಿದ ವೀಕ್ಷಣೆಗಳನ್ನು ಅವಲಂಬಿಸಿರುತ್ತದೆಯೇ ಹೊರತು, ಇಲ್ಲಿಯವರೆಗೆ ವೀಕ್ಷಣೆ ಮಾಡದ ಯಾವುದೇ ಲಕ್ಷಣಗಳನ್ನಲ್ಲ. ಗಣಿತದ ರೀತಿಯಲ್ಲಿ ಹೇಳುವದಾದರೆ ಯಾವುದೇ ಏಜೆಂಟ್ ನ ಸ್ವಭಾವವನ್ನು ಅದರ ಏಜೆಂಟ್ ಫಂಕ್ಷನ್ ನಿಂದ ವಿವರಿಸಬಹುದು. ಏಜೆಂಟ್ ಫಂಕ್ಷನ್ ಎನ್ನುವದು ಇಲ್ಲಿಯವರೆಗಿನ ವೀಕ್ಷಣೆಗಳನ್ನು ವಿಶ್ಲೇಷಿಸಿ ಏಜೆಂಟ್ ಮಾಡಬೇಕಾದ ಕ್ರಿಯೆಗಳನ್ನು ನಿರ್ಧರಿಸುತ್ತದೆ.
ವರ್ಗೀಕರಣ
Vote Result










ಕೃತಕ ಬುದ್ಧಿವಂತಿಕೆ
ಮಾನವ ಉಳಿದ ಜೀವಿಗಳಿಗಿಂತ ಭಿನ್ನ. ಯಾಕೆಂದರೆ ಮಾನವ ತನ್ನನ್ನು ತಾನು ಬುದ್ಧಿ ಹೆಚ್ಚು ಇರವುದಾಗಿ ಭಾವಿಸಿದ್ದಾನೆ. ಹಾಗಿದ್ದರೆ ಈ ಬುದ್ಧಿ ಎಂದರೆ ಏನು? ಹಾಗಿದ್ದರೆ ಬುದ್ಧಿ ಎಂದರೆ ಏನು? ಒಂದು ಕೊಟ್ಟಿರುವ ಪರಿಸ್ಥಿತಿಯಲ್ಲಿ ಹೆಚ್ಚು ಸರಿಯಾದ ನಿರ್ಧಾರವನ್ನು ಕೈಗೊಂಡರೆ ಅದು ಹೆಚ್ಚು ಬುದ್ಧಿವಂತಿಕೆಯ ಲಕ್ಷಣ. ಯಾವುದು ಸರಿಯಾದ ನಿರ್ಧಾರ ಎನ್ನುವದು ಆ ಸಂದರ್ಭದಲ್ಲಿ ಹಾಕಿಕೊಂಡ ಗುರಿಯನ್ನು ಅವಲಂಬಿಸಿರುತ್ತದೆ. ಹಾಗಿದ್ದರೆ ಕೃತಕ ಬುದ್ಧಿವಂತಿಕೆ ಎಂದರೆ ಏನು? ಒಂದು ಯಂತ್ರವು ಹೆಚ್ಚು ಸಮರ್ಧವಾಗಿ ನಿರ್ಧಾರಗಳನ್ನು ಕೈಗೊಂಡರೆ ಅದೊಂದು ಬುದ್ಧಿವಂತ ಎಂದು ಕರೆಯಬಹುದು. ಒಂದು ಯಂತ್ರವನ್ನು ಈ ನಿಟ್ಟಿನಲ್ಲಿ ಸಶಕ್ತವಾಗಿ ಮಾಡುವ ಶಾಸ್ತ್ರವೇ ಕೃತಕ ಬುದ್ಧಿವಂತಿಕೆ. ಈ ಶಾಸ್ತ್ರದ ಇತಿಹಾಸ ಕಳೆದ ೫೦ ವರ್ಷಗಳಿಗಿಂತ ಹಿಂದೆ ಹೋಗುವದಿಲ್ಲ.
ವರ್ಗೀಕರಣ
Vote Result










ಅಂತರಿಕ್ಷದಲ್ಲಿ "ಅರಮನೆಗಳು"!!??
ಎಂಟ್ರೋಪಿಯೆಂಬ ವಿಸ್ಮಯ
ಎಂಟ್ರೋಪಿ ಇದೊಂದು ಭೌತಶಾಸ್ತ್ರದಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಪದ. ತಮಗೆಲ್ಲರಿಗೂ ಶಾಖ ಎಂದರೆ ಗೊತ್ತು. ಅರೇರೀತಿ ಉಷ್ಣತೆ ಎಂದರೂ ಗೊತ್ತು. ಹೆಚ್ಚು ಉಷ್ಣತೆಯಿದ್ದರೆ ಹೆಚ್ಚು ಶಾಖ ಎನ್ನುವದು ಸಾಮಾನ್ಯ ನಂಬಿಕೆ. ಭೌತಶಾಸ್ಥ್ರಜ್ಞರ ಪ್ರಕಾರ 100 ಡಿಗ್ರೀ ಉಷ್ಣತೆಯಲ್ಲಿರುವ ಆವಿಯಲ್ಲಿರವ ಶಾಖದ ಪ್ರಮಾಣ 100 ಡಿಗ್ರೀ ಉಷ್ಣತೆಯಲ್ಲಿರುವ ನೀರಿಗಿಂತ ಹೆಚ್ಚು. ಇಲ್ಲಿ ನಾವು ಹೇಳುತ್ತಿರುವ ಎಂಟ್ರೋಪಿಯು ಈ ಶಾಖ ಮತ್ತು ಉಷ್ಣತೆಗಳಿಗೆ ಸಂಬಂಧಿಸಿದ್ದು.
Q ನ್ನು ಶಾಖ ಎಂದಿಟ್ಟುಕೊಳ್ಳೋಣ, T ನ್ನು ಉಷ್ಣತೆ ಎಂದಿಟ್ಟುಕೊಳ್ಳೋಣ, ಎಂಟ್ರೋಪಿಯು S ಎಂದು ಇರಲಿ.
ಈಗ ಎಂಟ್ರೋಪಿ S=Q/T .
ವರ್ಗೀಕರಣ
Vote Result










ಸ್ಟೋಕಾಸ್ಟಿಕ್ ಫಿಲ್ಟರಿಂಗ್
ತನ್ನ ಪ್ರೆಡಿಕ್ಷನ್ ಗಳಲ್ಲಿ ನಿಖರತೆಯತ್ತ ಸಾಗುವ ಮಾನವನ ಪ್ರಯತ್ನ ಪ್ರಶ್ಸಾತೀತ. ಮಾನವ ನಿರ್ಮಿತ ಯಂತ್ರಗಳಲ್ಲಿ ಈ ಪ್ರಯತ್ನ ಸತತವಾಗಿ ಸಾಗುತ್ತಲೇ ಇದೆ. ಕೆಲವೊಮ್ಮೆ ಇವು ಸಹಜ ಹಾಗೂ ಸರಳ , ಕೆಲವೊಮ್ಮೆ ಇದು ಸಂಕೀರ್ಣ ಹಾಗೂ ಜಟಿಲ. ನಿಖರತೆಯೆಂಬುದು ಎಷ್ಟು ಕಷ್ಟ ಪಟ್ಟರೂ ಸಹ ನಮ್ಮಿಂದ ದೂರವಾಗುತ್ತಲೇ ಇರುತ್ತದೆ. ಅಂತಹುವುಗಳಲ್ಲೂ ನಿಖರತೆಯನ್ನು ಸಾಧಿಸಲು ಪ್ರಯತ್ಸ ನಿರಂತರ ಹೊಸ ಶಾಸ್ತ್ರಗಳ ಮೂಲಕ ನಿರಂತರವಾಗಿ ಸಾಗಿದೆ. ಅಂತಹ ಪ್ರಯತ್ನಕ್ಕೆ ಸ್ಟೋಕಾಸ್ಟಿಕ್ ಫಿಲ್ಟರಿಂಗ್ ಎಂಬ ಸಂಭವನೀಯತೆಯ ಅಂಗಶಾಸ್ತ್ರ ಸಹಾಯಕ್ಕೆ ಬರುತ್ತದೆ.
ಇದನ್ನು ಮುಂದಿನ ಉದಾಹರಣೆಯೊಂದಿಗೆ ನೋಡೋಣ.
ವರ್ಗೀಕರಣ
Vote Result










ಆದಾಯ ತೆರಿಗೆಯ ಸುತ್ತ ಒಂದು ಸುತ್ತು
ಆದಾಯ ತೆರಿಗೆ ಪದ್ದತಿ ಜಗತ್ತಿನಲ್ಲಿ ಸರಕಾರಗಳು ಕಂಡುಕೊಂಡ ಪ್ರಮುಖ ಆದಾಯ ಮಾರ್ಗಗಳಲ್ಲಿ ಒಂದು. ಕಲ್ಪನೆ ತುಂಬಾ ಸರಳ. ನೀನು ನಿನಗಾಗಿ ಕ್ರೋಢೀಕರಿಸಿದ ಆದಾಯದಲ್ಲಿ ಸರಕಾರಕ್ಕೆ ಒಂದು ಭಾಗ ನೀಡು ಎಂದು.
ಜಗತ್ತಿನ ಆರ್ಥಿಕವಾಗಿ ಸಧೃಢ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಾನೂನಿನ ತಿಳಿವು ಅಲ್ಪ. ಆದಾಯ ತೆರಿಗೆಯ ಬಗ್ಗೆ ಸಾಮಾನ್ಯ ತಿಳುವಳಿಕೆ ಪ್ರತಿಯೊಬ್ಬರಿಗೂ ಅಗತ್ಯ. ದೇಶದ ಆದಾಯ ತೆರಿಗೆ ವ್ವವಹಾರವನ್ನು ನಿಭಾಯಿಸಲು ಸರಕಾರ ಆದಾಯ ತೆರಿಗೆ ಇಲಾಖೆಯನ್ನು ನಮೂದಿಸಿದೆ.
ಇತ್ತೀಚಿನ ದಿನಗಳಲ್ಲಿ ಪಾನ್ ಕಾರ್ಡ್ ತುಂಬಾ ಪ್ರಚಲಿತ. ಎಲ್ಲರೂ ಅದನ್ನು ಹೊಂದಲು ತೊಡಗಿಸಿಕೊಂಡಿದ್ದಾರೆ. ಕಾರಣವೇನೆಂದರೆ ಬ್ಯಾಂಕ್ ನವರು ಕೇಳಿದ್ದಾರೆ ಎಂಬುದೂ ಕೂಡ ಇರಬಹುದು.
ಏನಿದು ಪಾನ್ (PAN)?
ವರ್ಗೀಕರಣ
Vote Result










ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿ
ವಿಕಾಸದ ಹಾದಿಯಲ್ಲಿ ಸಾಮಾಜಿಕ ವ್ಯವಸ್ಥೆ ಬದಲಾವಣೆಗೆ ಒಳಪಡುತ್ತದೆ. ಈ ಬದಲಾವಣೆಗಳು ಕೆಲಸದಲ್ಲಾದರೂ ಇರಬಹುದು, ಸಮಾಜ ನಂಬಿದ ಮೌಲ್ಯಗಳಲ್ಲಾದರೂ ಇರಬಹುದು, ಸಮಾಜದ ಅಂಗಗಳು ಪರಸ್ಪರ ವ್ಯವಹರಿಸುವ ರೀತಿಯಲ್ಲಾದರೂ ಇರಬಹುದು ಅಥವಾ ಇನ್ಯಾವುದೇ ಸಾಮಾಜಿಕ ಸಂಬಂಧಗಳಲ್ಲಿರಬಹುದು. ಉದಾಹರಣೆಗೆ ಹಳ್ಳಿಯೆನ್ನುವದು ಅಭಿವೃದ್ಧಿಯಾಗಿ ಪೇಟೆಯಾಗಬಹುದು. ಅಥವಾ ಇನ್ಯಾವುದೇ ರೀತಿಯಿಂದ ಪೇಟೆಯೆನ್ನುವುದು ಹಳ್ಳಿಯಾಗಿ ಬದಲಾಗಬಹುದು
ವರ್ಗೀಕರಣ
Vote Result










ಮನುಷ್ಯ ಮತ್ತು ಪ್ರಕೃತಿ. ಅವಲಂಬನೆ, ಸವಾರಿ ಮತ್ತು ಸಮನ್ವಯ
ಆದಿ ಕಾಲದಿಂದಲೂ ಮನುಷ್ಯ ತನ್ನಲ್ಲಿರುವ ಟೂಲ್ ಗಳ, ಉಪಕರಣಗಳ ಮೂಲಕ ಪ್ರಕೃತಿಯ ಜೊತೆ ನ್ಯವಹರಿಸಲು, ನಿಸರ್ಗಕ್ಕೆ ತನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದಿಕಾಲದಲ್ಲಿ ಎಲುಬು, ಕಲ್ಲು, ಮರಗಳಿಂದ ಮಾಡಿದಂಥ ಆ ಉಪಕರಣಗಳು ಕೆಲವೇ ಕೆಲವು ಆಗಿರಬಹುದು. ಆದರೆ ಅವುಗಳಿಂದಲೇ ಮಾನವ ತನ್ನ ಆಹಾರ, ಬಟ್ಟೆ, ವಸತಿಗಳಿಗಾಗಿ ಒಂದು ಕಾಲದಲ್ಲಿ ವ್ಯವಹರಿಸಿದ್ದಾನೆ. ದಿನಗಳೆದಂತೆ ಮಾನವ ಕೇವಲ ಬೇಟೆಗಾರ ಮತ್ತು ಆಹಾರ ಹುಡುಕುವವನಾಗಿ ಉಳಿಯಲಿಲ್ಲ. ತನ್ನ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಖಾತ್ರಿಪಡಿಸಿಕೊಳ್ಳಲು ಇನ್ನೂ ಹೆಚ್ಚಿನ ಗುಣಮಟ್ಟದ ಉಪಕರಣಗಳು ಮತ್ತು ಅದಕ್ಕೆ ತಕ್ಕದಾದ ವೈಜ್ಞಾನಿಕ ಜ್ಞಾನ ಪಡೆಯಲು ಹೊರಟ
ವರ್ಗೀಕರಣ
Vote Result










ಸಂಭವನೀಯತೆ
ನಾವು ದಿನನಿತ್ಯ ನೋಡುವ ಹಲವಾರು ಘಟನೆಗಳಲ್ಲಿ ನಿರ್ದಿಷ್ಟವಾಗಿ ಹೇಳಬಹುದಾದಂಥ ಘಟನೆಗಳು ಕೆಲವೇ ಕೆಲವು. ಬಹಳ ಸಂದರ್ಭಗಳಲ್ಲಿ 2 ಘಟನೆಗಳನ್ನು ಹೋಲಿಸಿ ನೋಡುವಾಗ, ಒಂದು ಘಟನೆಯ ಸಾಧ್ಯತೆ ಹೆಚ್ಚು , ಇನ್ನೊಂದು ಘಟನೆಯ ಸಾಧ್ಯತೆ ಕಡಿಮೆ ಎಂದು ನಿರ್ಧರಿಸುತ್ತೇವೆ. ಹೀಗೆ ಸಾಧ್ಯತೆ ಹೆಚ್ಚು ಅಥವಾ ಕಡಿಮೆ ಎಂದು ಹೇಗೆ ನಿರ್ಧರಿಸುತ್ತೇವೆ. ಇವುಗಳನ್ನು ಅಭ್ಯಾಸ ಮಾಡುವ ಶಾಸ್ತ್ರವೇ ಸಂಭವನೀಯತೆ.
ಈ ಶಾಸ್ತ್ರದ ಉಗಮ ಹೆಚ್ಚು ಕಡಿಮೆ ಜೂಜಿನ ಅಡ್ಡೆಗಳಲ್ಲೇ ಆಯಿತೆನ್ನಬಹುದು. ಅಲ್ಲಿ ಮನುಷ್ಯ ಗೆಲ್ಲುವ ಸಾಧ್ಯತೆಗಳ ಕುರಿತು ಹೆಚ್ಚು ಹೆಚ್ಚು ವಿಚಾರಿಸಿದಂತೆಲ್ಲಾ ಈ ಶಾಸ್ತ್ರದ ಉಗಮಕ್ಕೆ ನಾಂದಿಯಾಗುತ್ತ ಹೋಯಿತು.
ವರ್ಗೀಕರಣ
Vote Result










ಸಮಾಜ ಮತ್ತು ಜ್ಞಾನ
ಕಣ್ಣಿಗೆ ಕಾಣುವದರ ಬಗ್ಗೆಲ್ಲ ಚಿಂತಿಸುವದು ಮಾನವನ ಸ್ವಭಾವ. ಅದೇ ರೀತಿ ಅವುಗಳನ್ನು ಸಿದ್ಧಾಂತಗೊಳಪಡಿಸಲು ಪ್ರಯತ್ನಿಸುವದೂ ಅವನ ಸ್ವಭಾವವೇ ಸರಿ. ಆದರೆ ಯಾವುದೇ ಸಿದ್ಧಾಂತಕ್ಕೆ ಸರಿಯಾದ ಆಧಾರಗಳಿಲ್ಲದೇ ಇದ್ದರೆ ಅದು ಮುರಿದು ಬೀಳುತ್ತದೆ. ಹೊಸ ಹೊಸ ಆಧಾರದ ಮೇಲೆ ಈ ಜಗತ್ತು ಮತ್ತೆ ಮತ್ತೆ ಹೊಸ ಹೊಸ ಸಿದ್ಧಾಂತಕ್ಕೊಳಪಡುತ್ತದೆ. ಸಿದ್ಧಾಂತಗಳಲ್ಲಿ ಹೊಸ ಹೊಸ ಬದಲಾವಣೆಗಳು ಕಾಣಸಿಗುತ್ತವೆ. ಹೀಗೆ ಜ್ಞಾನ ಎನ್ನುವದು ನಿರಂತರ ಬದಲಾವಣೆಗೆ ಒಳಪಡುತ್ತದೆ. ಇಂದು ನಾವು ಒಪ್ಪಿಕೊಂಡ ಜ್ಞಾನ ನಾಳಿನವರಿಗೆ ಅಜ್ಞಾನವಾಗಿ ಕಾಣಬಹುದು. ಇದೇ ಮಾನವ ಕುಲ ಹೊಸತನ್ನು ನಿರಂತರವಾಗಿ ಸೇರಿಸುತ್ತಲೇ ಇರುತ್ತದೆ.
ವರ್ಗೀಕರಣ
Vote Result









